.jpeg)

.jpeg)

ಸಂತ ಫ್ರಾನ್ಸಿಸ್ ಪದವಿ ಕಾಲೇಜಿನ ಕನ್ನಡ ವಿಭಾಗವು ದಿನಾಂಕ 15 - ೦4-2026ರ ಬುಧವಾರದಂದು ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಜಗದೀಶ್ ಬಾಬು ಬಿ.ವಿ ರವರ ಸಂಚಾಲಕತ್ವದಲ್ಲಿ ಅಪ್ರತಿಮ ಮುಖ ವೀಣೆ ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಒಂದು ಕಾರ್ಯಕ್ರಮದಲ್ಲಿ ನಾಡಿನ ಹೆಮ್ಮೆಯ ಕರ್ನಾಟಕ ಜಾನಪದ ಸಾರ್ವಭೌಮ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದರಾದ ಸನ್ಮಾನ್ಯ, ಶ್ರೀ ಮುಖವೀಣೆ ಅಂಜಿನಪ್ಪನವರು ವೀಣಾವಾದನ ಮಾಡಿದರು, ಅವರ ಅತ್ಯದ್ಭುತವಾದ ಜಲವೀಣಾ ವಾದನಕ್ಕೆ ವಿದ್ಯಾರ್ಥಿಗಳೆಲ್ಲರೂ ಫಿದಾ ಆದರು. ಚಿನ್ನುಡಿ ಸಂಘದ ಪದಾಧಿಕಾರಿಗಳೆಲ್ಲರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಯಿತು ಸರಿ ಸುಮಾರು 400 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಒಂದು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ನಾಡಿನ ಪ್ರಮುಖ ದಿನಪತ್ರಿಕೆಗಳಾದ ಪ್ರಜಾವಾಣಿ , ವಿಶ್ವವಾಣಿ , ಕನ್ನಡಪ್ರಭ , ವಿಜಯ ಕರ್ನಾಟಕ , ಸಂಜೆವಾಣಿ... ಮೊದಲಾದ ಪತ್ರಿಕೆಗಳು ಫೋಟೋ ಸಮೇತ ಕಾರ್ಯಕ್ರಮದ ವರದಿಯನ್ನು ಪ್ರಕಟಿಸಿರುವುದು ಹರ್ಷದಾಯಕವಾದ ವಿಚಾರ.
PB.NO. 3417, 3rd Block, 8th Main,Koramangala Bengaluru - 560034
Mob : 080-25531037 / 9449260409 / 9481857854
Email : info@stfranciscollege.edu.in
Website : www.stfranciscollege.edu.in